¡Sorpréndeme!

ಬಟ್ಟೆ ಶಾಪಿಂಗ್ ಮಾಡೋವಾಗ ಈ 6 ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ | Oneindia Kannada

2017-11-08 181 Dailymotion

ಶಾಪಿಂಗ್‍ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್‍ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ. ಸೋ…. ಮುಂದಿನ ಸಲ ಶಾಪಿಂಗ್ ಹೋದಾಗ ಈ 6 ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ.ಅಯ್ಯೋ ಟೈಂ ಇಲ್ಲ.. ಬೇಗ ಹೋಗ್ಬೇಕು ಅಂದುಕೊಂಡು ಎಂದೂ ಶಾಪಿಂಗ್ ಮಾಡ್ಬೇಡಿ. ಇಂತ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಡಿಸೈನ್‍ಗಳನ್ನ ನೋಡದೆ ಮೊದಲು ಅಂಗಡಿಗೆ ಹೋದಾಗ ಯಾವುದು ಕಣ್ಣಿಗೆ ಚೆನ್ನಾಗಿ ಕಾಣುತ್ತೋ ಅದನ್ನೇ ಕೊಂಡುಕೊಳ್ತೀವಿ. ಆದ್ರೆ ಇನ್ನೂ ಸ್ವಲ್ಪ ಸಮಯ ಹುಡುಕಿದ್ರೆ ಅದಕ್ಕಿಂತ ಚೆಂದದ ಡಿಸೈನ್‍ವುಳ್ಳ ಬಟ್ಟೆ ಸಿಗಬಹುದು. ಅಥವಾ ಒಳ್ಳೇ ಆಫರ್ ಕೂಡ ಲಭ್ಯವಾಗಿ ಖರ್ಚು ಕೂಡ ಕಡಿಮೆಯಾಗಬಹುದು.